ನೀ ಬರುವೆಯೆಂದು ನಿನ್ನ ಹಾದಿ ಕಾದಿರುವೆ
ನಿನಗಾಗಿಯೇ ಬಾಗಿಲಲ್ಲಿ ಕೂತಿರುವೆ
ಅಂಗಳದಲ್ಲಿ ಚಂದದ ಚಿತ್ತಾರ
ಕಂಗಳಲ್ಲಿ ನಿನ್ನ ಕಾಣುವ ಕಾತುರ
ಬಾಗಿಲಿಗೆ ಮಾವಿನ ತೋರಣ
ನೀ ಬರುವೆ ಎಂಬುವ ಕಾರಣ
ಮನೆಯೊಳಗೆ ಬಣ್ಣದ ಅಲಂಕಾರ
ಮನದೊಳಗೆ ನಿನ್ನ ನಗುವಿನ ಶೃಂಗಾರ
ಚೆಲ್ಲಿದೆ ಎಲ್ಲೆಡೆ ದೀಪದ ಬೆಳಕು
ಮುಖದಿ ಹರಡಿದೆ ನಿನ್ನ ರೂಪದ ಹೊಳಪು
ಮನೆದೇವರಿಗೆ ಹಚ್ಚಿದೆ ನಂದಾದೀಪ
ಮನದೆವರಿಗೆ ಹೆಚ್ಚಿದೆ ನನ್ನ ರೂಪ
ಸಿಹಿ ತಿನಿಸುಗಳು ಅಡುಗೆ ಮನೆಯಲಿ
ಸವಿ ಕನಸುಗಳು ಅಡುಗಿವೆ ಮನದಲಿ
ನೀ ಬರುವೆಯೆಂದು ನಿನ್ನ ಹಾದಿ ಕಾದಿರುವೆ
ನಿನಗಾಗಿಯೇ ಬಾಗಿಲಲ್ಲಿ ಕೂತಿರುವೆ
ನಿನಗಾಗಿಯೇ ಬಾಗಿಲಲ್ಲಿ ಕೂತಿರುವೆ
ಅಂಗಳದಲ್ಲಿ ಚಂದದ ಚಿತ್ತಾರ
ಕಂಗಳಲ್ಲಿ ನಿನ್ನ ಕಾಣುವ ಕಾತುರ
ಬಾಗಿಲಿಗೆ ಮಾವಿನ ತೋರಣ
ನೀ ಬರುವೆ ಎಂಬುವ ಕಾರಣ
ಮನೆಯೊಳಗೆ ಬಣ್ಣದ ಅಲಂಕಾರ
ಮನದೊಳಗೆ ನಿನ್ನ ನಗುವಿನ ಶೃಂಗಾರ
ಚೆಲ್ಲಿದೆ ಎಲ್ಲೆಡೆ ದೀಪದ ಬೆಳಕು
ಮುಖದಿ ಹರಡಿದೆ ನಿನ್ನ ರೂಪದ ಹೊಳಪು
ಮನೆದೇವರಿಗೆ ಹಚ್ಚಿದೆ ನಂದಾದೀಪ
ಮನದೆವರಿಗೆ ಹೆಚ್ಚಿದೆ ನನ್ನ ರೂಪ
ಸಿಹಿ ತಿನಿಸುಗಳು ಅಡುಗೆ ಮನೆಯಲಿ
ಸವಿ ಕನಸುಗಳು ಅಡುಗಿವೆ ಮನದಲಿ
ನೀ ಬರುವೆಯೆಂದು ನಿನ್ನ ಹಾದಿ ಕಾದಿರುವೆ
ನಿನಗಾಗಿಯೇ ಬಾಗಿಲಲ್ಲಿ ಕೂತಿರುವೆ
